Project 303!!Lot more on this page...
Thoughtsonfire!!
A continued legendary story ahead!!
Like and share...!!
Eternal love..with the twist of tales..!Reality to the core of its truth!!
Abhimanigale devarugalu🙏
Yuva gang!!nimma preethi haagu prothsaha irli..!
1)__ Platform number S15..__!
"The subscriber you are calling is out of coverage area...Please try after sometime"..Sapna call cut madi Railway station main entrance kade kaatharada kannininda nodta idlu...!"train depart aglikke 1/2 gante aste ide..Sapna enar utak pack Madtya or heege kaithirtya candle light dinner ge ??"kelta ond high pitched voice kiwi hatra kirik maadithu...Ade Namma nimmellara nechchina Meena...Sapnan close friend...!"Illa Kane innen bandbidtare.. on the way anthe.."replied Sapna.."Aithammaaa..Correct agi time ge coach olgade bandbidu...Train 9 gantege..By 8:45 ge nang nin mukha thorsbek...Nav hogi train li settle agirtivi...Vl call u once we get in" antha heli kaiyallidda ond fried rice parcel pack na bag olgade haki..Meena and bere friends allinda sapnange "see you later Bega bandbidu take care" antha heli platform 6 daari hididru..!ಮೊದಲೇ ದಣಿದಿದ್ದ ಸಪ್ನ ಅಲ್ಲೇ ಇದ್ದ ಒಂದು ಸೀಟ್ ಮೇಲೆ ಕುಳಿತು ಅರೆ ಹೊತ್ತು ಕಣ್ಮುಚ್ಚಿದಳು ವಿಶ್ರಾಂತಿಗಾಗಿ....!!
◆ಮೂರು ವರ್ಷಗಳ ಹಿಂದೆ Adondu Dina ಮುಂಜಾನೆ ಕಣ್ತೆರೆದಾಗ ಮನೆಮುಂದೆ ಬಂದಿದ್ದ ನಿಂಗಿ "ಅಕ್ಕ ಬೇಗ ಸ್ನಾನ ಮಾಡಿ ನಮ್ಮನೆಗ್ ಬನ್ನಿ ಕಾಡು ಹಂದಿ ಹೊಡೆದು ತಂದದ್ದುಂಟು ಒಳ್ಳೆಮೆಣಸ್ ಹಾಕಿ ಗಸಿ ಮಾಡಿ ರಡಿ ಮಾಡಿ ಇಡ್ತ್ತೆನೆ...ಬೇಗ ಬನ್ನಿ ಅಕ್ಕೋರೆ" ಅಂದು...ಜಗಲಿಯ ಚಿಟ್ಟೆ ಮೇಲೆ ಇದ್ದ ಎಲೆಅಡಿಕೆಯನ್ನು ಬಾಯಿಗೆ ತುರುಕಿ ಸುಣ್ಣ ಒಂದು ಗಟ್ಟಿಯನ್ನು ಹಾಗೆಯೇ ಬಾಯೊಳಗೆ ಹಾಕಿದ ನಿಂಗಿ ಸಪ್ನಾಳ ತಂದೆ ಉಮೇಶ ಮಾಸ್ಟ್ರಿಗೆ ಒಂದು ನಗು ಬೀರಿ ಕೆಂಪಾದ ಹಲ್ಲು ತೋರಿಸಿ ..."ಬರ್ತೇನೆ ಧಣಿ"...ಅಂದು ಹೊರಟಳು...!!
-ಸಶೇಷ
ಮನೆಯ ಮುದ್ದಿನ ಮಗಳು ಸ್ವಪ್ನ (ಪುಟ್ಟಕ್ಕ) ...ಶಾಲೆ ಮೆಟ್ಟಿಲು ತುಳಿದವಳಲ್ಲ....ಇದಕ್ಕೆ ಬಡತನ ಕಾರಣ ಎಂದು ತಿಳಿಯದಿರಿ...ರಮೇಶ ಮಾಸ್ಟರ್ ಊರಿಗಿಡೀ ಪಾಠ ಹೇಳಿಕೊಟ್ಟರೂ ಮಗಳ ವಿದ್ಯಾಭ್ಯಾಸದ ವಿಷಯದಲ್ಲಿ ಹಿಂದೇಟು ಹಾಕಿದರು...'ವಿದ್ಯೆ ಕಲಿತ ಮಗಳು ದಾರಿ ತಪ್ಪಿದರೆ' ಎನ್ನುವ ಭಯ...ಊರಿಡೀ ಟೀಕಿಸಿದರೂ ಲೆಕ್ಕಿಸದೆ...ಮಗಳ ವಿದ್ಯಾಭ್ಯಾಸದೆಡೆ ಮಹಾಪ್ರಾಣದ ನಕಾರ ಹಾಕಿ ಕುಳಿತಿದ್ದರು!!!..ಹಾಗಾಗಿ ಪುಟ್ಟಕ್ಕ ಮನೆಯಲ್ಲಿಯೇ ಇದ್ದುಕೊಂಡು ತಂದೆಯ ಪಾಠದೊಂದಿಗೆ ಜೀವನ ನಡೆಸಲು ಬೇಕಾದಷ್ಟೇ ಲೆಕ್ಕ ವ್ಯವಹಾರ ಹಾಗೂ ದಿನಪತ್ರಿಕೆ ಓದುವಷ್ಟು ವಿದ್ಯೆ ಕಲಿತಿದ್ದಳು...ಬೆಳಗೆದ್ದು ನಿತ್ಯಕರ್ಮಗಳನ್ನು ಮುಗಿಸಿ ತೋಟಕ್ಕೆ ಹೋಗುವುದು.. ದನಗಳಿಗೆ ಮೇವು ತರುವುದು...ಅಡಿಕೆ ಹೆಕ್ಕುವುದು ಮಧ್ಯಾಹ್ನದ ಊಟ ಮುಗಿಸಿ ಅರೆಹೊತ್ತು ಮಲಗಿ ಎದ್ದು ಬೆಟ್ಟ-ನದಿ ಅಲೆಯುವುದು...ಸಂಜೆ ಕಾಪಿ ಕುಡಿದು ತಂದೆ ಬಂದ ನಂತರ ಅವರೊಡನೆ ಮಾತನಾಡುತ್ತ ಆದಷ್ಟು ಜ್ಞಾನ ಸಂಪಾದಿಸುವುದು...ನಂತರ ಅಮ್ಮನೊಡನೆ ಸೇರಿ ಏನಾದ್ರು ಮನೆಕೆಲಸ ಮಾಡಿ ಮಲಗುವುದು...ಇದು ಸ್ವಪ್ನಳ(ಪುಟ್ಟಕ್ಕ) ದಿನಚರಿ ಆಗಿತ್ತು...ಹೀಗಾಗಿ ಸ್ವಪ್ನ ಲೋಕವಿಚಾರಗಳನ್ನು ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದಿ ತಿಳಿದಿದ್ದಳು ಹೊರತು ಏನನ್ನೂ ಕಣ್ಣಾರೆ ಕಂಡವಳಲ್ಲ...!! ಮಲೆನಾಡ ತಪ್ಪಲಿನಲ್ಲಿದ್ದ ರಮೇಶ ಮಾಸ್ತರ ಮನೆ ಒಂದು ಕಾಡಿನ ನಡುವೆ ಸ್ಥಿತವಾಗಿತ್ತು...ಬೆಟ್ಟ ಗುಡ್ಡಗಳಿಂದ ಸುತ್ತುವರಿಯಲ್ಪಟ್ಟು ಹಸಿರಿನ ಸಿರಿಯಲ್ಲಿ ಮೆರೆಯುತ್ತಿದ್ದ ಮನೆಯದು...ಎತ್ತ ದೃಷ್ಠಿ ಹಾಯಿಸಿದರೂ ಹಸಿರೇ ತುಂಬಿತ್ತು... ಮನೆಯಿಂದಿಳಿದು ತೋಟದ ದಾರಿ ಹಿಡಿದರೆ ಬಲ ಬದಿಗೆ "ನನ್ನೊಡನೆ ಸ್ಪರ್ಧಿಸಲು ಧೈರ್ಯವೇ ನಿನಗೆ ??"ಎಂದು ಪ್ರಶ್ನಿಸುವಂತೆ ಭಾಸವಾಗುವ ವೇಗದಿ ಸ್ಪಟಿಕ ದಂತೆ ಪರಿಶುದ್ಧವಾಗಿ ಹರಿಯುವ ಒಂದು ಚಿಕ್ಕ ನದಿ...ತೋಟದಿ ನಳನಳಿಸಿ ಎತ್ತರಕ್ಕೆ ಸಾಲುಸಾಲಾಗಿ ಬೆಳೆದಿರುವ ಅಡಕೆ ಮರಗಳು...ಈ ಚಿಗುರಿದ ಹಸಿರಿನ ಸಂಪತ್ತಿನ ನಡುವೆ ಹಂಚು ಹಾಕಿದ ತಂಪಾದ ಮನೆ ರಮೇಶ ಮಾಸ್ತ್ರ ಮನೆ...ಸದಾ ಚಿಗುರಿದ ಸಂತಸದಿಂದ ಪುಟ್ಟಕ್ಕಳ ಕಿಲಕಿಲ ನಗೆಯಿಂದ ತುಂಬಿತ್ತು...!!
-ಸಶೇಷ